🎶ಫುರ್ಟಾಲ್ ಮ್ಯೂಸಿಕ್ ಸಂಯೋಜನೆಯ ಮತ್ತೊಂದು ಹಾಡು "ಕನ್ನಡದ ಕಂಪು" ಶೀಘ್ರದಲ್ಲೇ ಬಿಡುಗಡೆಯಾಗಲಿದೆ.🎶

1 ನವೆಂಬರ್ 2024, ಕನ್ನಡ ರಾಜ್ಯೋತ್ಸವದ ಅಂಗವಾಗಿ ಬಿಡುಗಡೆಯಾಗಲಿರುವ ಈ ಗೀತೆ, ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಇತಿಹಾಸ, ಮತ್ತು ಪ್ರಕೃತಿಯ ಸೊಬಗು ಹಾಗೂ ಕನ್ನಡ ಭಾಷೆಯ ಶ್ರೇಷ್ಠತೆಯನ್ನು ಕೊಂಡಾಡುತ್ತದೆ. ಹಸಿರು ಹೊಲಗಳು, ಹಂಪಿಯ ಪುರಾತನ ಕಟ್ಟಡಗಳು, ಮತ್ತು ನಮ್ಮ ಭೂಮಿಯ ಅಪಾರ ಶೋಭೆಯನ್ನು ಈ ಹಾಡಿನ ಕಾವ್ಯರೂಪದಲ್ಲಿ ತರಲಾಗಿದೆ. 💚

ಡಾ. ಶ್ರಾವ್ಯ ಎಸ್. ರಾವ್

10/3/20241 min read


🎤 ಗಾಯನ: ಡಾ. ಶ್ರಾವ್ಯ ಎಸ್. ರಾವ್ 🎼 ಸಂಗೀತ ಸಂಯೋಜನೆ: ಫುರ್ಟಾಲ್ ಮ್ಯೂಸಿಕ್ ✍️ ಸಾಹಿತ್ಯ: ಮಿಶೆಲ್ ನೊರೊನ್ಹಾ 🎛️ ಮಿಕ್ಸಿಂಗ್ ಮತ್ತು ಮಾಸ್ಟರಿಂಗ್: ರಾಹುಲ್ ರಾಜ್ ಮ್ಯೂಸಿಕ್ ಮ್ಯೂಸಿಕ್ ಪ್ರೋಗ್ರಾಮಿಂಗ್ ಮೈಷ ಪಟೋಡಿಯಾ 🎙️ ಧ್ವನಿ ಮುದ್ರಣ : ದಿ ಬೆಂಗಳೂರು ಸ್ಟುಡಿಯೋ ವಿಶೇಷವಾಗಿ ಈ ಗೀತೆ "ಕನ್ನಡಾಂಬೆ" ಎಂದೇ ಹೆಸರಾಗಿರುವ ನಮ್ಮೆಲ್ಲರ ತಾಯಿ , ತಾಯ್ನಾಡಿಗೆ ನಮನ ಸಲ್ಲಿಸುತ್ತಾ, ಕನ್ನಡ ಭಾಷೆಯ ಶ್ರೇಯಸ್ಸನ್ನು ಸಾರುತ್ತದೆ. "ಜಯ ಹೇ ಕರ್ನಾಟಕ ಮಾತೆ" ಎಂಬ ಘೋಷಣೆಯೊಂದಿಗೆ ಕನ್ನಡಿಗರಲ್ಲಿ ಹೆಮ್ಮೆ, ಶಾಂತಿ ಮತ್ತು ಏಕತೆಯ ಸಂದೇಶವನ್ನು ಹರಡುತ್ತದೆ. 🌟 ಈ ಸಾಲಿನ ಕನ್ನಡ ರಾಜ್ಯೋತ್ಸವದ ಅಂಗವಾಗಿ, ನಮ್ಮ ಹೆಮ್ಮೆಯ ಕನ್ನಡ ನಾಡನ್ನು , ನಮ್ಮ ಕನ್ನಡದ ಶ್ರೇಷ್ಠತೆಯನ್ನು ಹರ್ಷದಿಂದ ಆಚರಿಸೋಣ. ನಮ್ಮ ತಾಯ್ನಾಡಿನ ಪ್ರೀತಿಯ ಸಂಸ್ಕೃತಿಯನ್ನು ಎಲ್ಲೆಡೆ ಹರಡೋಣ! 💛❤️